ಗೆಳೆಯರೇ,
ನಾವುಗಳು ಎಲ್ಲೆಲ್ಲೋ ಇದ್ದೆವು ಒಬ್ಬರಿಗೊಬ್ಬರ ಪರಿಚಯವೇ ಇರಲಿಲ್ಲ.
ಪೇಸ್ ಬುಕ್ ಅನ್ನೋ ಈ ಮಾಂತ್ರಿಕ ತಾಣ ನಮ್ಮನ್ನೆಲ್ಲಾ ಒಟ್ಟಾಗಿ ಸೇರಿಸಿ,
ಒಬ್ಬರನ್ನೊಬ್ಬರ ಪರಿಚಯ ಮಾಡಿಸಿ, ಗೆಳೆಯರನ್ನಾಗಿ ಮಾಡಿ, ನಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ.
ಇಲ್ಲಿ ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕುತ್ತೇವೆ. ಸುಖ ದುಃಖವನ್ನು ವಿನಿಮಯ ಮಾಡಿಕೊಳ್ಳುತ್ತೇವೆ.
ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆನೂ ಚರ್ಚೆ ಮಾಡುತ್ತೇವೆ.
ನಮಗಿಷ್ಟವಾದ ಫೋಟೋ(ಭಾವಚಿತ್ರ) ಗಳನ್ನು ಹಾಕಿ, ನೋಡಿ ಆನಂದಿಸುತ್ತೇವೆ.
ಪ್ರಪಂಚದ ಯಾವುದೇ ತಾಣದಲ್ಲಿದ್ದರೂ ಕ್ಷಣ ಮಾತ್ರದಲ್ಲಿ ಸಂಪರ್ಕದಲ್ಲಿ ಬರುತ್ತೇವೆ.
ಇಷ್ಟೆಲ್ಲಾ ಅವಕಾಶಗಳನ್ನು ನೀಡುತ್ತಿರುವ
"ಪೇಸ್ - ಬುಕ್ " ಗೆ ಹೊಸ ವರುಷ ದ ಈ ದಿನದಂದು
ಅಭಿನಂದನೆ ಸಲ್ಲಿಸುವುದು
ನಮ್ಮೆಲ್ಲಾ ಫೇಸ್ ಬುಕ್ ಗೆಳೆಯರ ಕರ್ತವ್ಯ ವಲ್ಲವೇ.
ನಿಮ್ಮಲ್ಲರ ಪರವಾಗಿ
ರಾಜು ವಿನಯ್ ದಾವಣಗೆರೆ
No comments:
Post a Comment